Saturday 2 May 2015

ಹೀಗೊಂದು ಚಿಂತನೆ

ಎತ್ತ ಹೋಗುತ್ತಿದೆ ನಮ್ಮ ಸಮಾಜ....ಮೊನ್ನೆ ಒಂದು ಬಟ್ಟೆ ಶಾಪ್ ಗೆ ಹೋಗಿದ್ದೆ ...ಆಲ್ಲಿ ನನ್ನ ಪರಿಚಯದವರೊಬ್ಬರು ಬಂದಿದ್ದರು...ಅವರಿಗೆ ಒಂದು ಮಗಳಿದ್ದಾಳೆ ವಯಸ್ಸು10-12 ಇರಬೇಕು..ಕುಶಲ ಮಾತಾಡಿದ ನಂತರ ...ಅವರ ಕೈಯ್ಯಲ್ಲಿರೋ ಕವರು ತೆಗೆದು ತೋರಿಸುತ್ತ ಹೇಳಿದರು...ನೋಡು ಈ ಡ್ರೆಸ್ ಚನ್ನಾಗಿಲ್ವ ಅಂತ ನಾನು ನೋಡಿ ತುಂಬಾ ಚನ್ನಾಗಿದೆ ಅಂದೆ..ನಿಜವಾಗಿಯೂ ತುಂಬಾ ವರ್ಕ್ ಮಾಡಿದ ಲೆಹೆಂಗ ಸೆಟ್ ಚನ್ನಾಗೆ ಇತ್ತು.....ಆಗ ಅವರು ನೋಡು ಇದನ್ನೇ ಬದಲಾಯಿಸಿಕೊಂಡು ಹೋಗೋಣ ಅಂತ ಬಂದೆ..ಇಷ್ಟ ಪಟ್ಟು ಮಗಳಿಗೆ ಅಂತ ತಕೊಂಡೆ..ಇವಳು ನೋಡಿದರೆ ಬೇಡವೇ ಬೇಡ ಅಂತ ಒಂದೇ ಹಠ ಅಂದಳು ..ನಾನು ಯಾಕೆ ಅಂತ ಕೇಳಿದಾಗ 
..ಅವರ ಉತ್ತರ ಕೇಳಿ ನನಗೆ ಆಶ್ಚರ್ಯ ಆಗೋಯ್ತು....ಯಾಕೆಂದರೆ ಆ ಲೆಹೆಂಗದ ಬ್ಲೌಸ್ ಉದ್ದ ಇದೆಯಂತೆ...ಅವಳಿಗೆ ಚಿಕ್ಕದಾದ ಬ್ಲೌಸ್ ಬೇಕಂತೆ...ಲೆಹಂಗ ಮತ್ತು ಬ್ಲೌಸ್ ನಡುವೆ ಗ್ಯಾಪ್ ಇಲ್ಲ...ಗೌರಮ್ಮನ ಹಾಗೆ ಕಾಣುತ್ತೆ....ಹೊಕ್ಕಳು,ಸೊಂಟ ಕಾಣೋ ಹಾಗೆ ಇರಬೇಕು ನನ್ನ ಡ್ರೆಸ್ ಅಂತ ಗಲಾಟೆಯಂತೆ....ನಾನು ಆದರೂ ನೋಡೋಣ ಅಂತ ಪುಟ್ಟಿ ಈ ಡ್ರೆಸ್ ಎಷ್ಟು ಚನ್ನಾಗಿದೆ ಅಂತ ಹೇಳಿದಾಗ ಅಯ್ಯೋ ಆಂಟಿ ನಿಮ್ಮನ್ನು ನೋಡಿದರೆ ಮಾಡರ್ನ್ ಇದ್ದಾಗೆ ಕಾಣುತ್ತೆ...ಆದರೆ ನೀವು ಅಮ್ಮನ ಹಾಗೆ ಗೌರಮ್ಮನ ಅನ್ನಬೇಕ.....ನನಗೆ ಏನು ಹೇಳಲು ತಿಳಿಯದೇ ಪೆಚ್ಹಾಗೋ ಪರಿಸ್ತಿತಿ ಬಂತು....ಅಲ್ಲ ಇಷ್ಟು ಚಿಕ್ಕ ಮಕ್ಕಳ ತಲೆಯಲ್ಲಿ ಇಂತ ಯೋಚನೆಗಳೆಲ್ಲಾ ಹೇಗೆ ಬರುತ್ವೆ....ಮಕ್ಕಳ ಮುಗ್ದತೆ ಅನ್ನೋದು ಎಲ್ಲಿ ಮಾಯವಾಗ್ತಿದೆ... ಇದಕ್ಕೆಲ್ಲ ಕಾರಣನಾದ್ರು ಏನು....ಟಿವಿ ಪ್ರಭಾವ ಇರಬಹುದಾ....ಅಯ್ಯೋ ನೆನೆಸಿಕೊಂಡರೆ ಭಯ ಆಗುತ್ತೆ...ನಾವೆಲ್ಲಾ ಕಾಲೇಜ್ ಮುಗಿದರೂ ಅಪ್ಪ ಅಮ್ಮನ ಲಕ್ಷ್ಮಣ ರೇಖೆ ದಾಟಿ ನಡಿತಾನೆ ಇರಲಿಲ್ಲ....ಇಂತಹ ವಿಷಯಗಳಲ್ಲಿ ಜ್ಞಾನ ನೇ ಇರಲಿಲ್ಲ....ಯಾವುದೇ ಡ್ರೆಸ್ ಕೊಡಿಸಿದರೂ ಸಂತೋಷದಿಂದ ಹಾಕೊತಾ ಇದ್ವಿ...ನಮಗೆ ಈ ವಯಸ್ಸಲ್ಲೂ ಗೊತ್ತಿರದ ಎಷ್ಟೋ ವಿಷಯಗಳು ಇಂದಿನ ಮಕ್ಕಳ ಬಾಯಲ್ಲಿ ಸಲಿಸಾಗಿ ಓಡಾಡುತ್ತವೆ ..ಇದೆಲ್ಲ ಸುಧಾರಣೆಯ ದಾರಿಯೋ ಅಥವಾ ಅವನತಿಯ ದಾರಿಯೋ...ಒಟ್ಟಾರೆ ಇಂದಿನ ಮಕ್ಕಳು ಯಾವ ಕಡೆ ಮುಖ ಮಾಡಿದ್ದಾರೆ ಅನ್ನೋದೇ ತಿಳಿಯದ ವಿಷಯ....ಕಾಲಾಯ ತಸ್ಮೈ ನಮಃ......